Friday, January 25, 2013

80ವರ್ಷಕ್ಕಿಂತ ಮೇಲ್ಪಟ್ಟವರಿಗೆ ಹೆಚ್ಚುವರಿ ನಿವೃತ್ತಿ ವೇತನ


1.7.1993ನೇ ಇಸವಿಗಿಂತ ಮೊದಲು ನಿವೃತ್ತರಾದವರಿಗೆ ಅಂದರೆ 80 ವರ್ಷದಿಂದ ಹೆಚ್ಚಿರುವ ಹಿರಿಯ ನಾಗರಿಕರಿಗೆ ಹೆಚ್ಚುವರಿ ನಿವೃತ್ತಿ ವೇತನ ನೀಡುವ ಬಗ್ಗೆ ಸರ್ಕಾರದ ಆದೇಶದ ಪ್ರತಿಯನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ,

80-85 ವಯಸ್ಸಿನ ಒಳಗಿನವರಿಗೆ - ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 20ರಷ್ಟು ಹೆಚ್ಚುವರಿ ನಿವೃತ್ತಿ ವೇತನ ಲಭಿಸುವುದು.

85-90 ವಯಸ್ಸಿನ ಒಳಗಿನವರಿಗೆ - ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 30ರಷ್ಟು ಹೆಚ್ಚುವರಿ ನಿವೃತ್ತಿ ವೇತನ ಲಭಿಸುವುದು.

90 ವಯಸ್ಸು ಮೀರಿದವರಿಗೆ - ಮೂಲ ನಿವೃತ್ತಿ ವೇತನ/ಕುಟುಂಬ ನಿವೃತ್ತಿ ವೇತನದ ಶೇಕಡ 50 ರಷ್ಟು ಹೆಚ್ಚುವರಿ ನಿವೃತ್ತಿ ವೇತನ ಲಭಿಸುವುದು.

ಪ್ರಸ್ತುತ ಆದೇಶದ ಪ್ರತಿ 3 ಪುಟಗಳಿದ್ದು, ಅವುಗಳನ್ನು ಈ ಕೆಳಗೆ ನೀಡಿದ ಲಿಂಕ್ ಬಳಸಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

https://docs.google.com/file/d/0B8jG-mwR_sxbQmpDa2JUQVNlOG8/edit

https://docs.google.com/file/d/0B8jG-mwR_sxbS1JMT0ZMbHNQaG8/edit

https://docs.google.com/file/d/0B8jG-mwR_sxbWGtmeUlheVJzZ0k/edit

(ಗಮನಿಸಿ,ಮೇಲಿ ನೀಡಿರುವ URL ನ್ನು copy ಮಾಡಿ browserಗೆ Paste ಮಾಡಿ Enter Key ಒತ್ತಿ. ಆವಾಗ ಪುಟ ತೆರೆದು ಕೊಳ್ಳುತ್ತದೆ. ನಂತರ ಪುಟದ Printout ತೆಗೆದುಕೊಳ್ಳಿ)

ಡೌನ್ಲೋಡ್ ಮಾಡಿಕೊಂಡ ಪ್ರತಿಯ ಜತೆಗೆ ಜನನ ದಿನಾಂಕ, ನಿವೃತ್ತಿ ಹೊಂದಿದ ದಿನಾಂಕ, ಪೆನ್ಶನ್ ನಂಬರ್, ಪೆನ್ಶನ್ ಪಡೆಯುತ್ತಿರುವ ಬ್ಯಾಂಕ್ನ ಖಾತೆ ಸಂಖ್ಯೆಯನ್ನು ನಮೂದಿಸಿರುವ ಮನವಿ ಪತ್ರವನ್ನು ಜಿಲ್ಲಾ ಪಿಂಚಣಿ ಅಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ತಮ್ಮ ಮನವಿಯ ಜತೆಗೆ ಪೆನ್ಶನ್ ಬುಕ್ ನ ಮೊದಲ ಪುಟ, ಜನನ ದಿನಾಂಕದ ದಾಖಲೆ ಪ್ರತಿ ಹಾಗು ಅಗತ್ಯ ದಾಖಲೆಗಳನ್ನು ಲಗತ್ತಿಸಲು ಮರೆಯಬೇಡಿ.

ಬೆಂಗಳೂರಿನ ನಿವಾಸಿಗಳು ಈ ದಾಖಲೆಗಳನ್ನು

ಜಿಲ್ಲಾ ಪಿಂಚಣಿ ಅಧಿಕಾರಿಗಳು,

ನ್ಯೂ ಪಬ್ಲಿಕ್ ಆಫೀಸ್ ಕಟ್ಟಡ

ಕೆ. ಆರ್. ವೃತ್ತ,

ಬೆಂಗಳೂರು
ವಿಳಾಸಕ್ಕೆ ಕಳುಹಿಸಿಕೊಡಬೇಕು.
ಇನ್ನಿತರ ಜಿಲ್ಲೆಯವರು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾ ಪಿಂಚಣಿ ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು.

ಹೆಚ್ಚಿನ ವಿವರಗಳು ಆದೇಶದ ಪ್ರತಿಯಲ್ಲಿದೆ.